೭ನೆ ತರಗತಿ ಕನ್ನಡ ರಸಪ್ರಶ್ನೆ ೨
೧)ಮೋಟೆಬೆಂನ್ನೂರು ಯಾವ ಜಿಲ್ಲೆಯಲ್ಲಿ ಬರುತ್ತದೆ.? ಉ:- ಹಾವೇರಿ ಜಿಲ್ಲೆ
೨)ಮೈಲಾರ ಮಹಾದೇವ ಯಾವಗ ಜನಿಸಿದನು?
ಉ:-೮ನೇ ಜೂನ್ ೧೯೧೧
೩)ಮೈಲಾರ ಮಹಾದೇವನ ತಂದೆ ಹೆಸರೆನು.?
ಉ:- ಮಾರ್ತಾಂಡಪ್ಪ
೪)ಮೈಲಾರ ಮಹಾದೇವನ ತಾಯಿ ಹೆಸರೆನು.?
ಉ:-ಬಸಮ್ಮ
೫)ಬಾಲಕ ಮಹಾದೇವನಿಗೆ ಯಾವ ಆಸೆ ಹೆಚ್ಚಾಯಿತು.?
ಉ:-ಬಾಲಕ ಮಹಾದೇವನಿಗೆ ಖಾದಿ ಬಟ್ಟೆಯನ್ನು ಕುರಿತು ಪ್ರಚಾರ ಮಾಡಬೇಕೆಂಬ ಆಸೆ ಹೆಚ್ಚಾಯಿತು.
೬)ಕಲಾದಗಿ ಯಾವ ಜಿಲ್ಲೆಯಲ್ಲಿ ಬರುತ್ತದೆ?
ಉ:- ವಿಜಯಪುರ.
೭)ಮೈಲಾರ ಮಹಾದೇವನಿಗೆ ಯಾರಿಂದ ಕರೆ ಬಂದಿತು?
ಉ:- ಮಹಾದೇವ ಅವರಿಗೆ ಸಬರಮತಿ ಆಶ್ರಮದಿಂದ ಕರೆ ಬಂದಿತು.
೮) ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದವರಿಗೆ ಯಾವ ಶಿಕ್ಷೆಯಾಯಿತು?
ಉ:-ಸೆರೆಮನೆ ವಾಸದ ಶಿಕ್ಷೆ.
೯)ಮೈಲಾರ ಮಹಾದೇವನ ಹೆಂಡತಿಯ ಹೆಸರೆನು?
ಉ:-ಸಿದ್ದಮ್ಮ
೧೦) ಗಾಂಧೀಜಿಯವರು 'ಬ್ರಿಟೀಷರೇ ಭಾರತ ಬಿಟ್ಟು ತೊಲಗಿ' ಎಂಬ ಘೋಷಣೆ ಯಾವಗ ಮಾಡಿದರು?
ಉ:-೧೯೪೨ರಲ್ಲಿ.
೧೧)ಮಹಾದೇವ ತನ್ನ ಸಂಗಡಿಗರೊಂದಿಗೆ ಯಾವ ಊರಿನ ರೈಲು ನಿಲ್ದಾಣ ಸುಟ್ಟು ಹಾಕಿದರು.?
ಉ:- ಸವಣೂರು ರೈಲ್ವೆ ನಿಲ್ದಾಣ.
೧೨)ಮಹಾದೇವ ತನ್ನ ಸಂಗಡಿಗರೊಂದಿಗೆ ಯಾವ ಊರಿನಲ್ಲಿ ಪೋಲಿಸರ ಬಂದೂಕು ಕೇಂದ್ರ ಸುಟ್ಟು ಹಾಕಿದರು.?
ಉ:-ಹೊನ್ನತ್ತಿಯಲ್ಲಿ.
೧೩)ಮೈಲಾರ ಮಹಾದೇವನ ಮಗಳ ಹೆಸರೆನು?
ಉ:-ಕಸ್ತೂರಿದೇವಿ
೧೪)ಕಾಳಗ ಪದದ ಅರ್ಥವೇನು?
ಉ:-ಯುದ್ಧ.
೧೫)ಭ್ಯಾಂಕು ಯಾವ ಭಾಷೆಯ ಪದ?
ಉ:-ಆಂಗ್ಲ ಭಾಷೆಯ ಪದ.
೧೬)ಪೂರ್ಣಚಂದ್ರ ತೇಜಸ್ವಿ ರವರ ತಂದೆಯ ಹೆಸರೆನು?
ಉ:-ರಾಷ್ಟ್ರಕವಿ ಕುವೆಂಪು.
೧೭)ಸನ್ನದ್ದ ಪದದ ಅರ್ಥವೇನು.?
ಉ:-ಸಿದ್ದವಾಗು.
೧೮)ಮಧು ಪದದ ಅರ್ಥವೇನು?
ಉ:- ಸಿಹಿ.
೧೯) ಅಬಚೂರಿನ ಪೋಸ್ಟಾಫೀಸ್. ಇದು ಯಾರ ಕಾದಂಬರಿ?
ಉ:-ಪೂರ್ಣಚಂದ್ರ ತೇಜಸ್ವಿ
೨೦)ಚಿದಂಬರ ರಹಸ್ಯ ಇದು ಯಾರ ಕಾದಂಬರಿ?
ಉ:-ಪೂರ್ಣಚಂದ್ರ ತೇಜಸ್ವಿ
೨೧)ಕಿರಗೂರಿನ ಗಯ್ಯಾಳಿಗಳು
ಇದು ಯಾರ ಕಾದಂಬರಿ?
ಉ:-ಪೂರ್ಣಚಂದ್ರ ತೇಜಸ್ವಿ
೨೨)ಪೂರ್ಣಚಂದ್ರ ತೇಜಸ್ವಿರವರ ತಮ್ಮನ ಹೆಸರೆನು.?
ಉ:-ಚೈತ್ರ
೨೩)ಎಲೆಗಳನ್ನು ಒಂದಕ್ಕೊಂದು ಸೇರಿಸಿ ಇರುವೆಗಳು ಕಟ್ಟುವ ಗೂಡುಗಳನ್ನು ಎನೆಂದು ಕರೆಯುತ್ತಾರೆ.
ಉ:- ಕೊಟ್ಟೆ.
೨೪)ಮಲೆನಾಡಿಗರ ಪ್ರಿಯ ಇರಯವೆಗಳು ಯಾವು.?
ಉ:- ಚಗಳಿ ಇರುವೆಗಳು.
೨೫)ಇಡೀ ಇರುವೆಗಳ ಗುಂಪಿಗೆ ಮೂಲ ಯಾರು?
ಉ:- ರಾಣಿ ಇರುವೆ.
೨೬)ಚಗಳಿ ಇರುವೆದು ಯಾವ ಪ್ರಧಾನ ಸಮಾಜ?
ಉ:-ಸ್ತ್ರೀ ಪ್ರಧಾನ ಸಮಾಜ.
೨೭)ಇರುವೆಗಳಿಂದ ಒಸರುವ ರಾಸಾಯನಿಕ ಯಾವುದು?.
ಉ:-ಫಿರಮೋನ್ ರಾಸಾಯನಿಕ .
೨೮) ಒಂದು ಚಗಳಿ ಇರುವೆ ಗೂಡಿನಲ್ಲಿ ಸುಮಾರು ಎಷ್ಟು ಇರುವೆಗಳು ಇರುತ್ತವೆ.?
ಉ:- ಐದರಿಂದ ಹತ್ತು ಲಕ್ಷ ಇರುವೆಗಳು.
೨೯)ಮಳೆ+ಕಾಲ=..?
ಉ:- ಮಳೆಗಾಲ
೩೦)ಮನೆ+ಕೆಲಸ=..?
ಉ:-ಮನೆಗೆಲಸ
೩೧) ಅರಸನ+ಮನೆ=..?
ಉ:- ಅರಮನೆ.
೩೨)ಹಿರಿದು+ಮರ=.?
ಉ:- ಹೆಮ್ಮರ
೩೩)ಕೆಂಪಾದ+ತಾವರೆ=..?
ಉ:- ಕೆಂದಾವರೆ.
೩೪)ಬಿಲ್ಲ ಹಬ್ಬ ನಾಟಕ ಬರೆದವರು ಯಾರು?
ಡಾ. H. S. ವೆಂಕಟೇಶಮೂರ್ತಿ.
೩೫)ಮಥುರೆಯ ರಾಜ ಯಾರು.?
ಉ:- ಕಂಸ
೩೬)ಕಂಸನ ತಂಗಿ ಯಾರು?
ಉ:-ದೇವಕಿ.
೩೭)ದೇವಕಿಯ ಪತಿಯ ಹೆಸರೇನು?
ಉ:-ವಸುದೇವ
೩೮)ವಾಸುದೇವ ಮತ್ತು ದೇವಕಿಯ ಅಷ್ಟಮ ಪುತ್ರ ಯಾರು?
ಉ:- ಶ್ರೀಕೃಷ್ಣ
೩೯)ಪಾಶ ಪದದ ಅರ್ಥವೇನು?
ಉ:- ಹಗ್ಗ.
೪೦) ಹಾಲಹಲ ಪದದ ಅರ್ಥವೇನು?
ಉ:-ವಿಷ
೪೧)ಕೃಷ್ಣ ಯಾರ ಸೊಂಟವನ್ನು ಮುರಿದ?
ಉ:-ಶಕಟನ ಸೊಂಟಾನೆ ಮುರಿದ.
೪೨)ಕೃಷ್ಣನ ಕೈಯಲ್ಲಿ ಸಿಕ್ಕ ಧೇನು ಏನಾದ?
ಉ:- ಬಡಿಯೊ ಬಡಿಗೆಯಾದ.
೪೩) ಉಮಾ ಹಾಡನ್ನು ಹಾಡಿದಳು.? ಈ ವಾಕ್ಯದಲ್ಲಿ ಬರುವ ಕ್ರಿಯಾ ಪದ ಯಾವುದು?
ಉ:- ಹಾಡಿದಳು
೪೪)ಸಂಕ್ರಾಂತಿಯಂದು ಸುಖ-ದು:ಖ ಪಾಠ ಬರೆದವರು ಯಾರು?
ಉ:- ಎ. ಆರ್. ಮಣಿಕಾಂತ್
೪೫)ಕಿಚ್ಚು ಪದದ ಅರ್ಥವೇನು?
ಉ:- ಬೆಂಕಿ
೪೬)ಸಂಕ್ರಾಂತಿಯಂದು ಸುಖ-ದು:ಖ ಪಾಠ ಯಾವ ಕೃತಿಯಿಂದ ಆಯ್ದು ಕೊಳ್ಳ ಲಾಗಿದೆ.?
ಉ:-ಅಮ್ಮ ಹೇಳಿದ ಎಂಟು ಸುಳ್ಳುಗಳು.
೪೭)ಅಮ್ಮ ಹೇಳಿದ ಎಂಟು ಸುಳ್ಳುಗಳು. ಯಾರ ಕೃತಿ.?
ಉ:- ಎ. ಆರ್. ಮಣಿಕಾಂತ್
೪೮)ಕುವೆಂಪು ರವರ ಆತ್ಮಕಥನ ಯಾವುದ?
ಉ:-ಕುವೆಂಪು.
೪೯) ಅಪ್ಪ ಅಂದ್ರೆ ಆಕಾಶ ಕೃತಿ ಬರೆದವರು ಯಾರ?
ಉ:-ಎ. ಆರ್. ಮಣಿಕಾಂತ್
೫೦)ಸಂಕ್ರಾಂತಿ ಯಾವ ತಿಂಗಳಲ್ಲಿ ಬರುತ್ತದೆ.?
ಉ:- ಜನೆವರಿ.